"ಅಚ್ಚ ಕನ್ನಡದ ಹೆಮ್ಮೆಯ,ಪರಿಪೂರ್ಣ ಕಲೆಯ ಆರಾಧನಯಲ್ಲೊಂದು ಅಳಿಲು ಸೇವೆ" ಎಂಬ ಧ್ಯೇಯವಾಕ್ಯವನ್ನು ಹೊತ್ತು ಹುಟ್ಟಿಕೊಂಡಿರುವ ಬೆಂಗಳೂರಿನ ಹವ್ಯಾಸೀ ಕಲಾವಿದರ ತಂಡವೇ "ಯಕ್ಷಸಿಂಚನ".
ಯಕ್ಷಗಾನ ಕ್ಷೇತ್ರದಲ್ಲಿ ಅಭ್ಯಾಸ ಹಾಗೂ ಅಧ್ಯಯನಕ್ಕೆ ಒತ್ತು ಕೊಟ್ಟು, ಗುಣಮಟ್ಟದ ಪ್ರದರ್ಶನಗಳನ್ನು ನೀಡುವ ಧ್ಯೇಯೋದ್ದೇಶ ಹೊಂದಿರುವ ಯಕ್ಷಸಿಂಚನ, ಹವ್ಯಾಸೀ ತಂಡಗಳ ಪೈಕಿ ವಿಭಿನ್ನವಾದ ಕಾರ್ಯವೈಖರಿಯೊಂದಿಗೆ ಬೆಳೆದು ಬಂದಿದೆ. ಯಕ್ಷಗಾನದಲ್ಲಿನ ಸಾಂಪ್ರದಾಯಿಕ ನಡೆ, ಕುಣಿತ, ಪಾತ್ರದೌಚಿತ್ಯವನ್ನು ಉಳಿಸಿ ಬೆಳೆಸುವ ಪಣ ತೊಟ್ಟು, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.